ತುಳುನಾಡ ಬಂಟ್ಸ್ ಕುಡ್ಲ, ತುಳುನಾಡು ಫ್ರೆಂಡ್ಸ್ ಕುಡ್ಲ, ಮಡಿಲು ಬಂಟರ ಸೇವಾ ದ್ವನಿ ಕುಡ್ಲ,ಅಲಯನ್ಸ್ ಕ್ಲಬ್ ಮಂಗಳೂರು, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಉಲ್ಲಾಳ ರಾಣಿ ಅಬ್ಬಕ್ಕ ಲೀಜನ್, ರೋಟರಿ ಕಮ್ಯುನಿಟಿ ಕ್ರಾಪ್ಸ್ ಆಫ್ ತುಳುನಾಡು ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಆಗಸ್ಟ್ 9 ರಂದು ಆಟಿಡೊಂಜಿ ದೋಸ್ತಿ ಲೆನ ಕೂಟ ನಡೆಯಿತು.
ಮುಖ್ಯ ಭಾಷಣಕಾರರಾಗಿ ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕರಾದ ಡಾ. ರಾಜೇಶ್ ಆಳ್ವ ಬದಿಯಡ್ಕ ರವರು ಮಾತನಾಡುತ್ತಾ ಇಂದಿನ ಆಟಿ ಕೂಟ ಐಸಾರಾಮ ಜೀವನದ ಕೂಟವಾಗಿ ಪರಿವರ್ತನೆ ಆಗುತ್ತಿದೆ ಅಂದಿನ ಕಾಲದಲ್ಲಿ
ಹಿರಿಯರು ಕಷ್ಟಕರವಾದ ಜೀವನದಲ್ಲಿ ತನ್ನ ಇಡೀ ವರ್ಷ ದುಡಿಮೆ ಮುಗಿದ ನಂತರ ಕಷ್ಟಕರವಾದ ಈ ಮಾಸದಲ್ಲಿ ರೋಗ ರುಜಿನಗಳು ಜಾಸ್ತಿ ಇದ್ದ ಕಾರಣ ಆ ಸಂದರ್ಭದಲ್ಲಿ ಹಳ್ಳಿ ಯಲ್ಲಿ ಸಿಗುತ್ತಿರುವ ಔಷದಿಯುತ*ಆಹಾರ ಪದ್ಧತಿಯನ್ನು ಮಾಡುತ್ತಿದ್ದರು ಆದರೆ ಈಗಿನ ಪರಿಸ್ಥಿತಿಯನ್ನು ಗಮನಿಸಿದಾಗ ಎಲ್ಲಾ ಕಡೆಗಳಲ್ಲೂ ಆಟಿದ ಕೂಟ ಅಂತ ಕಾರ್ಯಕ್ರಮವನ್ನು ಮಾಡಿ ಐಷಾರಾಮ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ಮಾಡುತ್ತಿರುವ ನಿಜವಾದ ಛೇದಕರವಾದ ಸಂಗತಿಯಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುನಾಡ ಬಂಟ್ಸ್ ಕುಡ್ಲದ ಅಧ್ಯಕ್ಷರಾದ ಜಿ ಕೆ ಹರಿಪ್ರಸಾದ್ ರೈ ಕಾರಮೊಗರು ಗುತ್ತುರವರ ನೇತೃತ್ವದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದ ಬಹುಮಾನ ಪ್ರಯೋಜಕರಾದ ಮಂಜರಿ ಫುಡ್ ನ ಮಾಲಕರಾದ ರಮೇಶ್ ಶೆಟ್ಟಿ, ಮಡಿಲು ಬಂಟರ ಸೇವಾ ದ್ವನಿ ಕುಡ್ಲ ಸದಸ್ಯರಾದ ಡಾ. ಮೀನಾ ಶರತ್ ಕುಮಾರ್ ಶೆಟ್ಟಿ ತುಳುನಾಡು ಪ್ರತಿಷ್ಠಾನ ಮುಲ್ಕಿಯ ಅಧ್ಯಕ್ಷರಾದ ರಾಜೇಶ್ ಅಮೀನ್, ಅಲಯನ್ಸ್ ಕ್ಲಬ್ ಮಂಗಳೂರು, ಮತ್ತು ರೋಟರಿ ಕಮ್ಯುನಿಟಿ ಕ್ರಾಸ್ ಆಫ್ ತುಳುನಾಡುನ ಅಧ್ಯಕ್ಷರಾದ ಸನ್ಮತ್ ಹೆಗ್ಡೆ
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಉಲ್ಲಾಳ ರಾಣಿ ಅಬ್ಬಕ್ಕ ಲೀಜನ್ ಅಧ್ಯಕ್ಷರಾದ ಪ್ರಶಾಂತ ಆಳ್ವ ತುಳುನಾಡ ಬಂಟ್ಸ್ ಕುಡ್ಲ ದ ಶೈಲೇಶ್ ರೈ, ವಿಶಾಲಾಕ್ಷಿ ಶೆಟ್ಟಿ, ಗಣೇಶ ಹೆಗ್ಡೆ, ಹರಿಣಾಕ್ಷಿ ಹರಿಪ್ರಸಾದ್b ಶೆಟ್ಟಿ,ಅವರು ವೀಣಾ ತಿಮ್ಮಪ್ಪ ಶೆಟ್ಟಿ,ಗೀತಾ ಶೆಟ್ಟಿ ಉಮೇಶ್ ಶೆಟ್ಟಿ,ಉಷಾ ಶೆಟ್ಟಿ,ಸುಧೀರ್ ಪೂಂಜಾ, ವಿನಯ ರಾಜೇಶ್ ಆಳ್ವ,ಪ್ರತಿಮಾ ಶೆಟ್ಟಿ ತುಳುನಾಡ ಫ್ರೆಂಡ್ಸ್ ನಾಗರಾಜ ಆಚಾರ್ಯ ಜಯಂತಿ,ಶಾಂತ, ಶೀಲಾ ಪಡೀಲ್ ಮುಂತಾದವರು ಉಪಸ್ಥಿತರಿದ್ದರು ಅವರು ಮನೆಯಲ್ಲಿ ತಯಾರಿಸಿದ ಸುಮಾರು 35 ವಿಧದ ಆಹಾರ ಪದಾರ್ಥಗಳನ್ನು ಸ್ನೇಹಕೂಟದೊಂದಿಗೆ ನೆರವೇರಿಸಲಾಯಿತು











